ಕೆನ್ಯ, ಎಪ್ರಿಲ್ 5: ಕೆನ್ಯಾ ಗಣರಾಜ್ಯದ ಉಪಾಧ್ಯಕ್ಷ ಕಲೋಂಜ಼ೋ ಮ್ಯುಸಿಯೋಕ ಅವರು ಕೆನ್ಯದ ಮಾತಾ ಅಮೃತಾನಂದಮಯಿ ಮಠದವರು ಕಟ್ಟಿಸಿಕೊಟ್ಟ ನೂತನ ಅನಾಥಾಲಯವನ್ನು ಅಮ್ಮನವರ ಸಾನ್ನಿಧ್ಯದಲ್ಲಿ ಉದ್ಘಾಟನೆ ಮಾಡಿದರು. ಅತಿ ನದಿ ಹತ್ತಿರ ನಡೆದ ಈ ಸಾರ್ವಜನಿಕ ಸಮಾರಂಭದಲ್ಲಿ ಉಪಾಧ್ಯಕ್ಷರೇ ಅಲ್ಲದೆ ಇನ್ನೂ ಹಲವು ಗಣ್ಯರು ಭಾಗವಹಿಸಿದ್ದರು. ಕ್ರೀಡೆ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ವಾವಿನ್ಯಾ ನ್ದೇತಿ ಮತ್ತು ಜಿಲ್ಲಾ ಕಲೆಕ್ಟರ್, ಹಲವಾರು ಪಾರ್ಲಿಮೆಂಟ್ ಸದಸ್ಯರು, ಕೆನ್ಯಾದ ಖ್ಯಾತ ಗಾಯಕ ಎರಿಕ್ ವೈನೈನ ಅವರು ಉಪಸ್ಥಿತರಿದ್ದರು. ಮೊದಲ ಹಂತದಲ್ಲಿ […]
Category / ವಾರ್ತೆ
ಅಮೃತಪುರಿ, ನವೆಂಬರ್ 10, 2010 ನಮ್ಮ ದೇಶದ ಸಾರ್ವಜನಿಕ ಸ್ಥಳಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಶುಚಿಗೊಳಿಸುವ ಗುರಿ ಹೊಂದಿರುವ ಈ ಯೋಜನೆ, ಸ್ವಚ್ಛತೆಯ ಮೂಲಕ ನಮ್ಮ ಸುಂದರ ನಿಸರ್ಗ ಹಾಗೂ ಭೂಮಿಯ ಕುರಿತಾದ ಮಾನವತೆಯ ಋಣದ ಬಗ್ಗೆ ಸಾಮಾಜಿಕ ಅರಿವನ್ನು ಮೂಡಿಸುವ ಅಭಿಲಾಷೆಯನ್ನು ಹೊಂದಿದೆ. ಸೆಪ್ಟಂಬರ್ 27, 2010ರಂದಿನ ತನ್ನ 57ನೆಯ ಜನ್ಮ ದಿನೋತ್ಸವದಂದು, ಅಮ್ಮ ಈ ಯೋಜನೆಯನ್ನುಜಾರಿಗೆ ತಂದರು. ಇದು ಅಮ್ಮನ ಜನ್ಮ ದಿನೋತ್ಸವದ ಆಶಯವೂ ಆಗಿದೆ. ಮಾತಾ ಅಮೃತಾನಂದಮಯಿ ಮಠ (ಮಾ.ಅ.ಮ.)ವು ರಾಜ್ಯ ಸರಕಾರಗಳ […]
27 ಅಕ್ಟೋಬರ್, 2010 ಅಮೃತಪುರಿ ಅಮಲ ಭಾರತಂ ಕ್ಯಾಂಪೇನ್ (ಏ.ಬಿ.ಸಿ.) ಅನ್ನುವ ಈ ಬೃಹದ್‌ಯೋಜನೆಯ ಸ್ವಯಂಸೇವಕರು ಬರುವ ಒಕ್ಟೋಬರ್ 31ರಂದು ಕೇರಳದಾದ್ಯಂತ, 14 ಜಿಲ್ಲೆಗಳ 54ಕ್ಕೂ ಮೀರಿದ ಸಾರ್ವಜನಿಕ ಸ್ಥಳಗಳಲ್ಲಿ ಶುಚೀಕರಣ ಯಜ್ಞ ನಡೆಸುವರು. ಶುಚೀಕರಣ ಯಜ್ಞದಲ್ಲಿ ಅಮಲ ಭಾರತಂ ಜೊತೆ ಸಾರ್ವಜನಿಕರ ಬೆಂಬಲವು ಸೇರಿಕೊಂಡಿದೆ. ಇದು ನವೆಂಬರ್ ಒಂದರಂದು ಆಚರಿಸಲ್ಪಡುವ ಕೇರಳದ 54ನೇ ರಾಜ್ಯೋತ್ಸವದ ಜೊತೆ ಜೋಡಿಕೊಂಡಿದೆ. ಮುಂಬರುವ ದಿನಗಳಲ್ಲಿ, ಅಮಲ ಭಾರತಂ ಕ್ಯಾಂಪೇನ್ (Amala Bharatam Campaign – ABC) ನ ಈ ಆರಂಭದ […]
27/09/2010, ಅಮೃತಪುರಿ ಒಂಬತ್ತು ಭಾರತೀಯ ಭಾಷೆಗಳಲ್ಲಿ ಆರಂಭಿಸಿದ ಮಾತಾ ಅಮೃತಾನಂದಮಯಿ ಮಠದ ಅಧಿಕೃತ ಅಂತರ್ಜಾಲಗಳನ್ನು ಬಿಷಪ್ ಮಾರ್ ಕ್ರಿಸೋಸ್ಟೆಮ್ ತಿರುಮೇನಿ (Bishop Mar Crisostem Metropolitan of Mar Thoma Church) ಉದ್ಘಾಟನೆ ಮಾಡಿದರು. ಕನ್ನಡ, ಮಲೆಯಾಳಂ, ತಮಿಳ್, ತೆಲುಗು, ಮರಾಠಿ, ಹಿಂದಿ, ಪಂಜಾಬಿ, ಬಂಗಾಳಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಈಗ ಆಶ್ರಮದ ಅಂತರ್ಜಾಲ ಸೇವೆ ಲಭ್ಯವಿದೆ. “ಐವತ್ತೇಳು ವರ್ಷಗಳಲ್ಲಿ ನೂರು ವರ್ಷಗಳ ಕೆಲಸ ಕಾರ್ಯಗಳನ್ನು ನಡೆಸಿದ ಅಮ್ಮ ಸಾಧಾರಣವಾದುದನ್ನು ಅಸಾಧಾರಣವಾದುದ್ದಾಗಿ ಮಾಡುತ್ತಾರೆಂದು ಮಾತ್ರ ಅಮ್ಮನನ್ನು ವಿವರಿಸಬಹುದು. […]
ದೇಶದಲ್ಲಿ ಸಮಾಜಕ್ಕೆ ವಿಪತ್ತಾಗಿ ಪರಿಣಮಿಸಿರುವ ಮಾಲಿನ್ಯಕ್ಕೆ ವಿರುದ್ಧವಾಗಿ ಯುವಕರ ಹೊಸ ಯೋಜನೆ ಅಮ್ಮನ 57ನೇ ಜನ್ಮದಿನೋತ್ಸವದ ವೇದಿಕೆಯಿಂದ ಆರಂಭವಾಯಿತು. ಪರಿಸರ ಶುಚೀಕರಣ ತಮ್ಮ ಕರ್ತವ್ಯ ಎಂಬ ದೃಢ ಪ್ರತಿಜ್ಞೆಯನ್ನು ಅಮ್ಮನ ಮಕ್ಕಳು ಮಾಡಿದರು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಅಮ್ಮನ ಘೋಷಣೆ ತಮ್ಮ ಜೀವನದ ವ್ರತ ಎಂದಾಗಿದೆ ಆ ಪ್ರತಿಜ್ಞೆ. ಪ್ರತಿಜ್ಞೆ ಭೂಮಿಯು ನನ್ನ ತಾಯಿ. ಶುಚಿತ್ವ ಪ್ರಜ್ಞೆಯು ದೈವತ್ವದ ಪ್ರಜ್ಞೆಯೇ ಆಗಿದೆಯೆಂಬ ಅರಿವಿನೊಂದಿಗೆ – ನನ್ನ ಜೀವನದ ಮುಂಬರುವ ದಿನಗಳಲ್ಲಿ ಪರಿಸರ ನೈರ್ಮಲ್ಯದ್ದೂ, ಶುಚಿತ್ವದ್ದೂ, […]

Download Amma App and stay connected to Amma