ನೀನು ಜಗತ್ತಿನಲ್ಲಿ ಬಾಳು, ಕೆಲಸ ಮಾಡು, ಸುಖಗಳನ್ನು ಅನುಭವಿಸು; ಆದರೆ ಒಂದು ವಿಷಯವನ್ನು ಯಾವಾಗಲೂ ನೆನಪಿಡು – ಪ್ರಾಪಂಚಿಕ ಸಂಪಾದನೆ, ಹುಡುಕಾಟ ಮತ್ತು ಶೇಖರಣೆಗಳೆಲ್ಲಾ ಬೋಳು ತಲೆಗೆ ಬಾಚಣಿಗೆ ತೆಗೆದಿಟ್ಟುಕೊಂಡಂತೆ. ಮಕ್ಕಳು ಕೇಳಬಹುದು, “ಇದರ ಅರ್ಥ ಜಗತ್ತನ್ನು ತ್ಯಜಿಸಿ, ಕಾಡಿಗೆ ಹೋಗಿ, ಕಣ್ಣುಮುಚ್ಚಿ ಕೂತಿರಬೇಕೆಂದೇ ?” ಅಲ್ಲ. ಜಗತ್ತನ್ನು ತ್ಯಜಿಸಬೇಕೆಂದೂ ಅಲ್ಲ. ಆದರೆ ಆಲಸ್ಯ ಮತ್ತು ಅಜ್ಞಾನ ಸರಿಯಲ್ಲ. ಯಾವುದೇ ಕಾಲದಲ್ಲಿ, ಹೇಗೇ ಬದುಕಿದರೂ, ಸಮಯ ಬಂದಾಗ ಸಾವು ಬಂದೇ ಬರುತ್ತದೆ. ಎಲ್ಲವನ್ನೂ ನಾವು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬಹುದು, […]
Category / ವಾರ್ತೆ
ಎಲ್ಲವೂ ನಮ್ಮ ಇಚ್ಛೆಗೆ ಅನುಗುಣವಾಗಿ ನಡೆಯುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಹತ್ತು ಮೊಟ್ಟೆಗಳನ್ನು ಮರಿಗಳಾಗಲು ಇಟ್ಟರೆ, ಹತ್ತೂ ಮೊಟ್ಟೆಗಳು ಮರಿಗಳಾಗುವುದಿಲ್ಲ. ನಮ್ಮ ಇಚ್ಛೆಯಂತೆ ನಡೆದರೆ, ಆ ಎಲ್ಲಾ ಮೊಟ್ಟೆಗಳೂ ಮರಿಗಳಾಗಬೇಕು. ಅದು ಸಾಧ್ಯವಿಲ್ಲ. ಆದ್ದರಿಂದ ಎಲ್ಲವನ್ನೂ ಅವನ ಇಚ್ಛೆಗೆ ಬಿಟ್ಟುಕೊಡುವ ಶರಣಾಗತ ಮನೋಭಾವ ನಮ್ಮೊಳಗೆ ಬೆಳೆಯಬೇಕು. ಅದೇ ನಮ್ಮ ಜೀವನದ ಧ್ಯೇಯವಾಗಿರಬೇಕು. ಕೆಲವರು ಕೇಳಬಹುದು, “ನಿಮ್ಮ ಕೃಷ್ಣನು ‘ವೇತನ ಬಯಸದೆ ಕೆಲಸ ಮಾಡು’ ಎಂದು ಹೇಳುತ್ತಾನೆ ಅಲ್ಲವೇ?” ಇದು ಎಂದಿಗೂ ಸರಿಯಲ್ಲ. ಕರ್ಮ ಮಾಡಿದಾಗ ನಾವು ನಿರೀಕ್ಷಿಸಿದಂತೆ ಫಲ […]
ಜೀವನದಲ್ಲಿ ಎರಡೇ ಸಂಗತಿಗಳಿವೆ – ಕರ್ಮ ಮಾಡುವುದು ಮತ್ತು ಫಲವನ್ನು ಅನುಭವಿಸುವುದು. ಅನೇಕರು ಹೇಳುವುದುಂಟು, ‘ಇದುವರೆಗೂ ನಾನು ತಿಳಿದೂ ತಿಳಿದೂ ಯಾವ ತಪ್ಪನ್ನೂ ಮಾಡಿಲ್ಲ, ಆದರೂ ಈ ಕಷ್ಟಗಳನ್ನೆಲ್ಲಾ ಅನುಭವಿಸಬೇಕಾಗಿದೆ’ ಎಂದು. ಒಂದು ವಿಷಯ ಖಂಡಿತ. ನಾವು ಮಾಡಿದ ಕರ್ಮದ ಫಲವನ್ನು ನಾವೇ ಅನುಭವಿಸಬೇಕು. ಅದರ ಫಲವನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಸಾವಿರಾರು ಹಸುಗಳ ನಡುವೆ ಒಂದು ಕರುವನ್ನು ಬಿಟ್ಟರೆ, ಅದು ಅದರ ತಾಯಿಯ ಬಳಿಗೇ ಹೋಗಿ ಸೇರುತ್ತದೆ. ಅದೇ ರೀತಿ ಪ್ರತಿಯೊಬ್ಬರೂ ಅವರವರ ಕರ್ಮಫಲವನ್ನು ಅವರೇ […]
ಕಳೆದ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ 40+ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಮಾತಾ ಅಮೃತಾನಂದಮಯಿ ಮಠ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ. ದೇಶ ಹೆಮ್ಮೆಯ ಯೋಧರನ್ನು ಕಳೆದುಕೊಂಡಿದೆ. ಯೋಧರ ಕುಟುಂಬಕ್ಕೆ ಸಹಾಯ ಮಾಡುವುದು ನಮ್ಮ ಧರ್ಮ, ನಮ್ಮನ್ನು ಸುರಕ್ಷಿತವಾಗಿಡಲು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಸ್ಥರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ಶ್ರೀ ಮಾತಾ […]
ಪ್ರಶ್ನೆ: ತಪಸ್ಸಿನಿಂದ ಶಕ್ತಿ ಹೇಗೆ ಉಂಟಾಗುತ್ತದೆ ? “ಒಂಬತ್ತು ಕವಲುಗಳಿರುವ ಒಂದು ನದಿಯಿದೆ. ಅದರ ಪ್ರವಾಹಕ್ಕೆ ಬಲವಿಲ್ಲ. ಆದರೆ ಆ ಒಂಬತ್ತು ಕವಲುಗಳನ್ನು ಮುಚ್ಚಿ ನದಿಯಲ್ಲಿ ಮಾತ್ರ ನೀರು ಹರಿಯಲು ಬಿಟ್ಟರೆ, ಪ್ರವಾಹ ಶಕ್ತಿಶಾಲಿಯಾಗುತ್ತದೆ. ಆ ಶಕ್ತಿಯಿಂದಲೇ ಕರೆಂಟ್ ಉತ್ಪಾದಿಸುತ್ತಾರೆ. ಇದೇ ತರ ನಿಮ್ಮ ಆಲೋಚನೆಗಳನ್ನು, ಬಹುಮುಖವಾಗಿ ಹಾರುವ ಮನಸ್ಸನ್ನು, ಏಕತ್ವದಲ್ಲಿ ಕೇಂದ್ರೀಕರಿಸಿದರೆ, ನಿಮ್ಮಲ್ಲಿ ನಿಶ್ಚಯವಾಗಿಯೂ ಈ ಶಕ್ತಿ ಉಂಟಾಗುತ್ತದೆ. ಇತರರಿಗೆ ಶರೀರ ಮೂಲಕವೂ, ಮನಸ್ಸು ಮೂಲಕವೂ, ಬುದ್ಧಿ ಮೂಲಕವೂ, ಪ್ರವೃತ್ತಿ ಮೂಲಕವೂ, ಮಾತು ಮೂಲಕವೂ, ಈ […]

Download Amma App and stay connected to Amma