Category / ವಾರ್ತೆ

ಒಬ್ಬ ವ್ಯಕ್ತಿಯ ಹೆಂಡತಿ ತೀರಿಕೊಂಡಳು. ಅವಳ  ಆತ್ಮಶಾಂತಿಗಾಗಿ ಪ್ರಾರ್ಥನೆ ನಡೆಸಲು, ಗಂಡನು ಒಬ್ಬ ಪುರೋಹಿತನನ್ನು ಕರೆತಂದನು.  ಅವರು ಕಾರ್ಯಗಳನ್ನು ನಡೆಸುತ್ತಿದ್ದ ಸಮಯದಲ್ಲಿ, ಈ ಮಂತ್ರವನ್ನು ಜಪಿಸಿದರು: ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’. ಅದರ ಅರ್ಥ ಗಂಡನಿಗೆ ತಿಳಿಯಲಿಲ್ಲ. ಅವನು ನೇರವಾಗಿ ಪುರೋಹಿತರನ್ನು ಕೇಳಿದ, “ನೀವು  ಪಠಿಸಿದ  ಮಂತ್ರದ ಅರ್ಥವೇನು?” ಪುರೋಹಿತರು ವಿವರಿಸಿದರು, “‘ಈ ಲೋಕದಲ್ಲಿರುವ ಎಲ್ಲರೂ ಸುಖಿಗಳಾಗಲಿ; ಎಲ್ಲರೂ ಐಶ್ವರ್ಯವಂತರಾಗಿ ಮತ್ತು ಶಾಂತಿಯುತರಾಗಿರಲಿ.’” ಮಂತ್ರವನ್ನು ಅರ್ಥಮಾಡಿಕೊಂಡಾಗ, ಅವನು ಪುರೋಹಿತರನ್ನು ಕೇಳಿದ, “ನನ್ನ ಹೆಂಡತಿಯ ಆತ್ಮಕ್ಕಾಗಿ ಪ್ರಾರ್ಥಿಸಲು ನಾನು […]

ಧರ್ಮ ಜೀವನದ ಒಂದು ಅವಿಭಾಜ್ಯ ಅಂಗ (ಮಾರ್ಗದರ್ಶಿ). ಒಬ್ಬರನ್ನೊಬ್ಬರು ಪ್ರೀತಿಸುವುದು, ಪರಸ್ಪರ ಸೇವೆ ಮಾಡುವುದು, ಕ್ಷಮಿಸುವುದು, ಸಹನೆಯಿಂದಿರುವುದು, ಮತ್ತು ಕರುಣಾಮಯವಾಗಿ ವರ್ತಿಸುವುದು – ಎಂಬ ಈ ಗುಣಗಳನ್ನು ಕಲಿಸುವುದೇ ಧರ್ಮ.  ಅದ್ವೈತವು ಒಂದು ಅನುಭವ. ಆದಾಗ್ಯೂ, ಅದನ್ನು ದೈನಂದಿನ ಜೀವನದಲ್ಲಿ ಪ್ರೇಮ ಮತ್ತು ಕರುಣೆಯ ರೂಪದಲ್ಲಿ ಪ್ರಕಟಿಸಬಹುದು. ಸನಾತನ ಧರ್ಮದ ಗುರುಗಳಾದ ಋಷಿಮುನಿಗಳು ಮತ್ತು ಮಹಾತ್ಮರು ನಮಗೆ ಬೋಧಿಸುವುದು ಈ ಮಹಾನ್ ಪಾಠವನ್ನೇ. ನಾವು ಮರೆತುಹೋಗಿರುವ ಧರ್ಮದ ಭಾಷೆಯೇ ಕರುಣೆಯ ಭಾಷೆ. ಧರ್ಮವು ಬೋಧಿಸುವ ಪ್ರೇಮ ಮತ್ತು […]

“ಒಬ್ಬರ ಕೋಪ ಮತ್ತು ಅವಿವೇಕದಿಂದ ಉಂಟಾಗುವ ತೊಂದರೆಯನ್ನು, ಮತ್ತೊಬ್ಬರ ಸಹನೆ, ನಮ್ರತೆ ಮತ್ತು ಶಾಂತತೆಗಳು ಸರಿದೂಗಿಸುತ್ತವೆ.” ಒಂದು ಕುಟುಂಬದಲ್ಲಿನ ಎಲ್ಲ ಸದಸ್ಯರು ಒಂದೇ ಸ್ವಭಾವದವರಾಗಿರಬೇಕು ಎಂಬುದಿಲ್ಲ. ಅಲ್ಲಲ್ಲಿ ಹಠಮಾರಿ, ಅವಿವೇಕಿ ಮತ್ತು ಕೋಪಿಷ್ಠನಾದ ವ್ಯಕ್ತಿಯೂ ಇರಬಹುದು. ಆದರೆ, ಅದೇ ಕುಟುಂಬದಲ್ಲಿ ಸಾತ್ವಿಕ, ಶಾಂತ ಮತ್ತು ವಿವೇಕದಿಂದ ಆಲೋಚಿಸಿ ಎಚ್ಚರಿಕೆಯಿಂದ ಕಾರ್ಯಗಳನ್ನು ಮಾಡುವ ವ್ಯಕ್ತಿಯೂ ಇರಬಹುದು. ಈ ಇಬ್ಬರಲ್ಲಿ ಯಾರು ಆ ಕುಟುಂಬದಲ್ಲಿ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಪಾಡುತ್ತಾರೆ? ಖಂಡಿತವಾಗಿ ಎರಡನೆಯ ವ್ಯಕ್ತಿಯೇ. ಅವರ ವಿವೇಕ, ನಮ್ರತೆ ಮತ್ತು […]

ಭಾರತದ ಸಂಪತ್ತೆಂದರೆ ಪ್ರೇಮ. ಜೀವನದ ಅಡಿಪಾಯ ಪ್ರೇಮವಾಗಿದೆ. ಇಂದು ನಾವು ಅನುಭವಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಲ್ಲಿ ಶೇಕಡಾ ತೊಂಬತ್ತು ಭಾಗ ಆಗಿಹೋದ ದುಃಖ ಮತ್ತು ನೋವುಗಳಿಂದ ಉಂಟಾಗಿವೆ. ಇಂತಹ ಗುಣವಾಗದ ಅನೇಕ ಗಾಯಗಳೊಂದಿಗೆ ಪ್ರತಿಯೊಬ್ಬರೂ ಇಂದು  ಜೀವಿಸುತ್ತಿದ್ದಾರೆ. ಇಂತಹ ಗಾಯಗಳನ್ನು ಗುಣಪಡಿಸಲು ವೈದ್ಯಶಾಸ್ತ್ರದಲ್ಲಿ ಯಾವುದೇ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಇದಕ್ಕೊಂದು ಪರಿಹಾರವಿದೆ. ಪರಸ್ಪರ ಹೃದಯವನ್ನು ತೆರೆಯಿರಿ. ಭಾವನೆಗಳನ್ನು ಹಂಚಿಕೊಳ್ಳಿರಿ. ಒಬ್ಬರ ಕೊರತೆಯನ್ನು ತುಂಬಲು ಇನ್ನೊಬ್ಬರು ಪ್ರಯತ್ನಿಸಬೇಕು. ಮಕ್ಕಳೇ, ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆದಾಗ ನಮ್ಮ […]

ಅಮ್ಮನ ಬಳಿ ವಿವಿಧ ಸ್ವಭಾವದ ಅನೇಕ ಜನರು ಬರುತ್ತಾರೆ. ಅನೇಕ ಕುಟುಂಬ ಸಮಸ್ಯೆಗಳು ಸಣ್ಣ ವಿಷಯಗಳಿಂದ ಶುರುವಾಗುತ್ತವೆ. ಜೀವನವು ಸಮಸ್ಯೆಗಳಿಂದ ತುಂಬಿದೆ. ಸ್ವಲ್ಪ ತಾಳ್ಮೆ ಇದ್ದರೆ, ನಾವು ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಒಮ್ಮೆ ಪತಿ ಪತ್ನಿಯರು ಅಮ್ಮನ  ಬಳಿಗೆ ಬಂದರು. ಹೆಂಡತಿಗೆ ಕೆಲವೊಮ್ಮೆ ಮಾನಸಿಕ ಸಮತೋಲನ ಸ್ವಲ್ಪ ತಪ್ಪುತ್ತಿತ್ತು. ಯಾವುದಾದರೂ ಒತ್ತಡ ಉಂಟಾದಾಗ ಇದು ಸಂಭವಿಸುತ್ತಿತ್ತು. ಆಗ ಅವರು ಏನು ಹೇಳುತ್ತಿದ್ದಾರೆಂದು ಅವರಿಗೇ ತಿಳಿಯುತ್ತಿರಲಿಲ್ಲ. ಆದರೆ ಅವರಿಗೆ ಗಂಡನ ಮೇಲೆ ಬಹಳ ಪ್ರೀತಿಯಿತ್ತು. ಇದನ್ನು ತಿಳಿದುಕೊಂಡು, ಅಮ್ಮ […]