Category / ಅಮ್ಮನ ಸಂದೇಶ

ಇವತ್ತಿನ ಮಕ್ಕಳೂ ಯುವಕರೂ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೇ ಕಾಣುತ್ತಿರುವುದು. ನಮ್ಮಲ್ಲಿಲ್ಲದ ಹಲವು ಒಳ್ಳೆಗುಣಗಳು ಅವರಲ್ಲಿ ಕಂಡು ಬರುತ್ತದೆ. ಆದರೆ, ನಮ್ಮ ಮೌಲ್ಯಗಳನ್ನು, ಸಂಸ್ಕೃತಿಯನ್ನು ಪೂರ್ಣವಾಗಿ ಮರೆತು ಪಾಶ್ಚಾತ್ಯ ರೀತಿಗಳ ಅಂಧಾನುಕರಣೆಯೇ ಇವತ್ತು ಕಂಡುಬರುವುದು. ಅದು ಪ್ಲಾಸ್ಟಿಕ್ ಸೇಬು ಕಚ್ಚಿದ ಹಾಗೆ; ಶಿವನು ಬ್ರಹ್ಮನ ವೇಷ ಹಾಕಿದಂತೆ. ಇದರಿಂದ ನಮ್ಮ ನಿಜ ವ್ಯಕ್ತಿತ್ವ ನಾಶವಾಗುತ್ತದೆ. ಆದಕಾರಣ ನಾವು ಬೆಳೆದ ಸಂಸ್ಕೃತಿಗೆ ಮರಳಲು ಪ್ರಯತ್ನಿಸಬೇಕು. ಅದಕ್ಕಾಗಿ ಚಿಕ್ಕ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಈ ಸಂಸ್ಕೃತಿಯ ಭದ್ರ ಬುನಾದಿ ಹಾಕಲು ತಾಯಂದಿರು […]

ಮಕ್ಕಳೇ, ಸುತ್ತಲೂ ಒಂದು ಸಲ ದೃಷ್ಟಿ ಹರಿಸಿ ನೋಡಿ. ಅದನ್ನೊಮ್ಮೆ ವಿಷ್ಲೇಶಣೆ ಮಾಡಿ. ಲೋಕದ ಇವತ್ತಿನ ಪರಿಸ್ಥಿತಿ ಏನಂತ ಸ್ವಲ್ಪ ಅರಿತುಕೊಳ್ಳೋಣ. ಅದಕ್ಕೆಂದೇ ಇರುವ ದಿವಸವಿದು. ಜಗತ್ತಿನ ಜನಗಳು ಎಷ್ಟೆಲ್ಲಾ ತರದಲ್ಲಿ ಕಷ್ಟ ಪಡುತ್ತಿದ್ದಾರೆ. ಅವರ ಜೀವನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಒಂದು ವರ್ಷದ ಹಿಂದೆ ನಡೆದ ಘಟನೆಯೊಂದು ಅಮ್ಮನಿಗೆ ನೆನಪಾಗುತ್ತಿದೆ; ಮುಂಬೈಯಲ್ಲಿನ ಮಕ್ಕಳು ಹೇಳಿ ಗೊತ್ತಾಗಿದ್ದು. ಮುಂಬೈಯಲ್ಲಿ ಒಂದು ಕಡೆ ಒಬ್ಬಾತನಿಗೆ ಷುಗರಿನ ಖಾಯಿಲೆಯಿತ್ತು. ಆ ವ್ಯಕ್ತಿಯ ಕಾಲಲ್ಲಿ ಒಂದು ಗಾಯವಾಗಿ, ಬಲಿತು ದೊಡ್ಡ ಹುಣ್ಣಾಯಿತು. […]

ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮೂಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ನದಿಯ ದಡದಲ್ಲಿ ದೋಣಿಯನ್ನು ಕಟ್ಟಿಟ್ಟು ಹುಟ್ಟು ಹಾಕುವದಾದರೆ ಆಚೆಯದಡಕ್ಕೆ ಮುಟ್ಟುವುದಿಲ್ಲ. ಅದೇ ರೀತಿ “ನಾನು” ಎನ್ನುವ ಚಿಂತೆಯನ್ನು ಬಿಟ್ಟು “ನಿನ್ನ” {ಭಗವಂತನ} ಕೈಯಲ್ಲಿನ ಲೇಖನಿ, ಅಥವಾ ಬಣ್ಣ ಹಚ್ಚುವ ಒಂದು ಬ್ರಶ್ ಎನ್ನುವ ರೀತಿಯಲ್ಲಿ ರ್ಪೂಣವಾಗಿ ಸಮರ್ಪಿಸಬೇಕು. ಈ ರೀತಿಯ ಶರಣಾಗತಿಯನ್ನು ನಮ್ಮಲ್ಲಿ ಬೆಳೆಸಿಕ್ಕೊಳ್ಳಬೇಕು. ಪ್ರಯತ್ನಿಸ ಬಾರದು ಎಂದಲ್ಲ; ಹಾಗೆ ಅರ್ಥ ಮಾಡಿಕೊಳ್ಳಬಾರದು. ಪ್ರಯತ್ನಕ್ಕೆ ಯಾವಾಗಲು ಒಂದು […]

ತೊಂಬತ್ತು ಪ್ರತಿಶತ ಮಕ್ಕಳು ಶಾರೀರಿಕ ಮತ್ತು ಮಾನಸಿಕ ಒತ್ತಡಗಳಿಂದ ಪ್ರತಿಯೊಂದು ನಿಮಿಷವು ದುಃಖದಿಂದ ಕಳೆಯುತ್ತಿದ್ದಾರೆ. ಚಿಂತಿಸುವುದರಿಂದ ಮಾತ್ರ ಕೆಲಸವಾಗವುದಿಲ್ಲ ಎಂದು ನಮಗೆ ಗೊತ್ತು. ಐವತ್ತು ಪ್ರತಿಶತ ರೋಗಗಳು ಬರುವುದು ಮಾನಸಿಕ ಒತ್ತಡಗಳಿಂದ ಎಂದು ಹೇಳುತ್ತಾರೆ. ಆರೋಗ್ಯಹೀನತೆ ಮತ್ತು ಅಲ್ಪಾಯುಷಿಯಾಗುವುದಲ್ಲ ಜೀವನದ ಉದ್ದೇಶ. ಅನಾವಶ್ಯಕ ಮಾನಸಿಕ ಒತ್ತಡ ನಮಗೆ ಏತಕ್ಕೆ ಬೇಕು? ಅದರ ಬದಲಿಗೆ ಶರಣಾಗತರಾಗುವುದೇ ನಮಗಿರುವ ಪ್ರಾಯೋಗಿಕ ಪರಿಹಾರ. ಒಂದು ಗಿಡದ ಬುಡಕ್ಕೆ ನೀರು ಹಾಕಿದರೆ, ಗಿಡವು ಚೆನ್ನಾಗಿ ಬೇಗ ಬೆಳೆಯುತ್ತದೆ. ಆದರೆ ಅದರ ಕೊಂಬೆಗಳಿಗೆ ನೀರು […]