Category / ಅಮೃತವಾಣಿ

ಏತಕ್ಕಾಗಿ ತಾವು ಓದುತ್ತಿದ್ದೇವೆ ಎನ್ನುವ ಅರಿವಾದರೂ ಇಂದಿನ ಕಿರಿಯರಿಗೆ ಇಲ್ಲ. ಹೇಗಾದರೂ ಒಂದು ಸರ್ಟಿಫಿಕೇಟ್ ಸಂಪಾದಿಸಬೇಕೆಂದಲ್ಲದೆ, ವಿದ್ಯಾಭ್ಯಾಸದಿಂದ ಸರಿಯಾದ ಜ್ಞಾನವನ್ನೋ, ಒಳ್ಳೆ ಸಂಸ್ಕಾರವನ್ನೋ ಪಡೆಯ ಬೇಕೆಂದು ಇವತ್ತಿನ ಯುವಕರಿಗೆ ಇಚ್ಛೆಯಿಲ್ಲ. ಅವರಲ್ಲಿ ಅದನ್ನು ಪ್ರೇರೇಪಿಸಲು ಅಧ್ಯಾಪಕರಿಗೂ ಆಗುವುದಿಲ್ಲ. – ಅಮ್ಮ

ಪ್ರೊಫೆಸರ್‌ಗಳು ಯಂತ್ರದಂತೆ ಕಲಿಸುತ್ತಾರೆ. ಮಕ್ಕಳು ಗೋಡೆಯಂತೆ ಕುಳಿತಿರುತ್ತಾರೆ. ಹೃದಯ ಹೃದಯದೊಂದಿಗಿನ ಸಂವಾದವಿಲ್ಲ. ಅಲ್ಲಿ ಮಕ್ಕಳ ವ್ಯಕ್ತಿತ್ವ ಸರಿಯಾಗಿ ಜಾಗ್ರತವಾಗುವುದಿಲ್ಲ. ಅವರು ಇನ್ನೇನೋ ಆಗಲು ಕಷ್ಟ ಪಡುತ್ತಾರೆ. ಉಡುಪಿಗೆ ಬೇಕಾಗಿ ಶರೀರವನ್ನು ಕತ್ತರಿಸಿದಂತೆ, ಚಪ್ಪಲ್‌ಗೆ ಬೇಕಾಗಿ ಕಾಲು ಕತ್ತರಿಸಿದಂತೆ. – ಅಮ್ಮ

ಹೃದಯವಿಲ್ಲದ ಜೀವನ ಇವತ್ತು ನಾವು ನಡೆಸುತ್ತಿರುವುದು. ಶವಕ್ಕೆಮೇಕಪ್ ಮಾಡಿದ ಹಾಗೆ. ನೌಕರಿಗೆ ಬೇಕಾಗಿ ಜೀವಿಸುತ್ತಿದ್ದೇವೆಯೇ ಹೊರತು ಜೀವಿಸಲಿಕ್ಕೆ ಬೇಕಾಗಿ ನೌಕರಿ ನಾವು ಮಾಡುವುದಲ್ಲ. ನಾವು ಇವತ್ತು ನಡೆಯುತ್ತಿರುವ ಕಂಪ್ಯೂಟರ್‌ನಂತೆ; ನಮ್ಮ ಜೀವನ ಯಾಂತ್ರಿಕವಾಗಿ ಬಿಟ್ಟಿದೆ. – ಅಮ್ಮ