Category / ಅಮೃತವಾಣಿ

ಸಮುದಾಯದಲ್ಲಿ ಒಳ್ಳೆ ಬದಲಾವಣೆ ತರಬೇಕೆಂದು ನಾವು ಪ್ರಾಮಾಣಿಕವಾಗಿ ಬಯಸುವುದಾದರೆ, ಅದಕ್ಕಾಗಿ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡಬೇಕು. ನಾವು ಕ್ರಿಯಾತ್ಮಕವಾಗಿ ಏನಾದಾರೂ ಮಾಡಬೇಕು. ನಾವು ಒಳ್ಳೆಯದನ್ನು ಮಾಡಬೇಕೆಂದು ಬಯಸಿದರೆ ಮಾತ್ರ ಸಾಲದು. ಒಂದಷ್ಟು ತ್ಯಾಗ, ಸ್ವಲ್ಪ ಪ್ರಯತ್ನ ಮಕ್ಕಳ ಕಡೆಯಿಂದ ಮಾಡಬೇಕು. ­- ಅಮ್ಮ

ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ಸಿಗಬೇಕಾದದ್ದು ಅವರ ತಾಯಿಯಂದಿರಿಂದ. ಆದರೆ ಇವತ್ತು ನಮ್ಮ ತಾಯಂದಿರಿಗೆ ಅವರ ಮಕ್ಕಳು ಡಾಕ್ಟರಾಗಬೇಕು, ಅಲ್ಲದಿದ್ದರೆ ಎಂಜಿನೀಯರ್ ಆಗಬೇಕು ಎಂದು ಮಾತ್ರವೆ ಇರುವುದು. ಮಕ್ಕಳು ಒಳ್ಳೆ ಮನುಷ್ಯರಾಗಬೇಕು ಎನ್ನುವುದಕ್ಕೆ, ಅಪ್ಪ ಅಮ್ಮಂದಿರು ಸ್ವಲ್ಪವೂ ಪ್ರಾಮುಖ್ಯತೆ ನೀಡುವುದಿಲ್ಲ. ನಮಗೆ ನಮ್ಮದೆ ಆದ ಯಾವುದೆ ಆದರ್ಶವಿಲ್ಲ. – ಅಮ್ಮ

ಇಂದು ನಾವು ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಲಿಸುತ್ತಿದ್ದೇವೆ. ಆದರೆ ಜೀವನವೆನ್ನುವುದು ಕೇವಲ ಬಿಸಿನೆಸ್ ಮಾತ್ರವಲ್ಲ. ಅದು ಹೇಗೆ ಜೀವನವನ್ನು ಅದರ ಪೂರ್ಣತೆಯಲ್ಲಿ ಅನುಭವಿಸುವುದು ಎನ್ನುವುದನ್ನು ಕಲಿತುಕೊಳ್ಳಬೇಕಾದರೆ, ಆಧ್ಯಾತ್ಮಿಕತೆಯನ್ನು ಅರಿತುಕೊಳ್ಳಬೇಕು. ಆಧ್ಯಾತ್ಮಿಕತೆಯು, ಜೀವನದ ಪೂರ್ಣ ಮ್ಯಾನೇಜ್‌ಮೆಂಟನ್ನು ಕಲಿಸುತ್ತದೆ. – ಅಮ್ಮ

ನಮ್ಮ ಮಕ್ಕಳು ಹಲವು ವಿಧದ ವಿಷಯಗಳ ಬಗ್ಗೆ ಹೆಚ್ಚು ಕಲಿಯುತ್ತಾರೆ. ಆದರೆ ಈ ತಿಳುವಳಿಕೆಯೆಲ್ಲ ಅಡಿಪಾಯವಿಲ್ಲದೆ ಕಟ್ಟಿದ ಮನೆಯ ಹಾಗೆ. ಮೂಲಭೂತವಾಗಿ ಅರಿತು ಕೊಂಡಿರಬೇಕಾದ ಆಧ್ಯಾತ್ಮಿಕತೆಗೆ ನಾವು ನಮ್ಮ ಜೀವನದಲ್ಲಿ ಯಾವ ಸ್ಥಾನವನ್ನೂ ಕೊಡುತ್ತಿಲ್ಲ. – ಅಮ್ಮ

ಏತಕ್ಕಾಗಿ ತಾವು ಓದುತ್ತಿದ್ದೇವೆ ಎನ್ನುವ ಅರಿವಾದರೂ ಇಂದಿನ ಕಿರಿಯರಿಗೆ ಇಲ್ಲ. ಹೇಗಾದರೂ ಒಂದು ಸರ್ಟಿಫಿಕೇಟ್ ಸಂಪಾದಿಸಬೇಕೆಂದಲ್ಲದೆ, ವಿದ್ಯಾಭ್ಯಾಸದಿಂದ ಸರಿಯಾದ ಜ್ಞಾನವನ್ನೋ, ಒಳ್ಳೆ ಸಂಸ್ಕಾರವನ್ನೋ ಪಡೆಯ ಬೇಕೆಂದು ಇವತ್ತಿನ ಯುವಕರಿಗೆ ಇಚ್ಛೆಯಿಲ್ಲ. ಅವರಲ್ಲಿ ಅದನ್ನು ಪ್ರೇರೇಪಿಸಲು ಅಧ್ಯಾಪಕರಿಗೂ ಆಗುವುದಿಲ್ಲ. – ಅಮ್ಮ