Category / ಅಮೃತವಾಣಿ

ನದಿಯೂ ಸಮುದ್ರವೂ ಮಲಿನಗೊಳ್ಳುವುದೆಂದರೆ, ನಮ್ಮ ರಕ್ತದಲ್ಲಿ ವಿಷ ಕಲೆಸಿದಂತೆ ಎಂಬ ಪ್ರಜ್ಞೆ ನಾವು ಬೆಳೆಸಿಕೊಳ್ಳಬೇಕು. – ಅಮ್ಮ

ಜನ ನಿಬಿಡತೆಯಿಂದಾಗಿ ಮಾತ್ರ ಲೋಕವಾಗುವುದಿಲ್ಲ; ಸಮಾಜವಾಗುವುದಿಲ್ಲ. ಅದನ್ನು ಒಳ್ಳೆತನವೂ ಕರುಣೆಯೂ ಇರುವ ಮನುಷ್ಯರು ಸೇರಿ ಮಾಡಬೇಕು. ಮನುಷ್ಯ ಮನುಷ್ಯರನ್ನು ಪ್ರೇಮಿಸುವಂತಾಗಬೇಕು; ಪ್ರಕೃತಿಯನ್ನೂ ಪ್ರೇಮಿಸಲು ಸಾಧ್ಯವಾಗಬೇಕು. – ಅಮ್ಮ

ಸರ್ವ ಪಾಪನಾಶಿನಿಯಾದ ಗಂಗೆಯೆ ನಿಸ್ವಾರ್ಥ ಸೇವೆಯ ಪ್ರತೀಕ. – ಅಮ್ಮ

ಅಧ್ಯಾತ್ಮವು ಧನಕ್ಕೋ ಕೀರ್ತಿಗೋ ಎದುರಲ್ಲ. ಅವನ್ನು ಗಳಿಸುವುದಕ್ಕೆ ತಡೆಯೂ ಅಲ್ಲ. ಆದರೆ ಅದಕ್ಕಾಗಿ ನಾವು ಸ್ವೀಕರಿಸುವ ಮಾರ್ಗ ಧಾರ್ಮಿಕವಾಗಿರಬೇಕೆಂದು ಮಾತ್ರವೆ ಆಧ್ಯಾತ್ಮಿಕ ಆಚಾರ್ಯರು ಹೇಳುವುದು. – ಅಮ್ಮ

ವೇದಾಂತವು, ಪ್ರಪಂಚವನ್ನೂ ಪ್ರಪಂಚಜೀವನವನ್ನೂ ನಿಷೇಧಿಸುವುದಲ್ಲ. ಯಥಾರ್ಥದಲ್ಲಿ ಪ್ರಪಂಚದ ಸುಖದುಃಖಗಳ ನಡುವಿನಲ್ಲಿ ಇರುವುದೆ ಎಲ್ಲಕ್ಕಿಂತಲೂ ಅತೀತವಾದ ಶಾಂತಿಯೂ ಆನಂದವೂ ಅನುಭವಿಸಲಿಕ್ಕಿರುವ ಮಾರ್ಗವೆಂದು ಅದು ಉಪದೇಶಿಸುತ್ತದೆ. – ಅಮ್ಮ