ಅಧ್ಯಾತ್ಮವೇನಂದರೆ ಜೀವನದಲ್ಲಿ ನಾವು ಬಾಳುವ ಮೌಲ್ಯಗಳು. ಅವುಗಳೂ ತಂತ್ರ ಜ್ಞಾನವೂ ಕೈಮೇಳವಿಸಿದಾಗ ಮಾತ್ರವೇ ಮನುಕುಲಕ್ಕೆ ಸರಿಯಾದ ಬೆಳವಣಿಗೆಯೂ ವಿಕಾಸವೂ ಕರಗತವಾಗುವುದು. ಇದು ಹೇಗೆ ಸಾಧ್ಯವಾಗಿಸೋಣ ಎಂಬುವುದೇ ಈ ಶತಮಾನದ ಅತಿ ದೊಡ್ಡ ಸವಾಲು. – ಅಮ್ಮ
Category / ಅಮೃತವಾಣಿ
ನಾವು ವ್ಯಕ್ತಿಗಳನ್ನು ಪ್ರೇಮಿಸುವುದೂ, ವಸ್ತುಗಳನ್ನು ಉಪಯೋಗಿಸುವುದೂ ತಾನೆ ಮಾಡ ಬೇಕಾಗಿರುವುದು. ಆದರೆ ಇಂದು ನೇರ ವಿರುದ್ಧ ನಾವು ಮಾಡುತ್ತಿರುವುದು: ವ್ಯಕ್ತಿಗಳನ್ನು ಉಪಯೋಗಿಸುತ್ತೇವೆ; ವಸ್ತುಗಳನ್ನು ಪ್ರೀತಿಸುತ್ತೇವೆ. ಈ ತರ ಆದರೆ ಕುಟುಂಬಗಳ ಅವನತಿಯಾಗುತ್ತದೆ, ಸಮಾಜದ ತಾಳಲಯ ತಪ್ಪುತ್ತದೆ. – ಅಮ್ಮ
ಇವತ್ತು “ಯೌವನ” ಎಂದು ಹೇಳುವ ಕಾಲಘಟ್ಟ ಜೀವನದಲ್ಲಿ ಇಲ್ಲದಾಗಿ ಹೋಗುತ್ತಲಿದೆ. ಮನುಷ್ಯನು ಬಾಲ್ಯದಿಂದ ನೇರವಾಗಿ ಮುಪ್ಪಿನತ್ತ ಬೆಳೆಯುತ್ತಾನೆ. ದೇವರಾಗಿ ಮಾರ್ಪಡುವ ಸಾಧ್ಯತೆಯುಳ್ಳ ಮನುಷ್ಯನನ್ನು ಪಿಶಾಚಿಯಾಗಿ ಮಾರ್ಪಡಿಸುವ ಈ ಮದ್ಯಕ್ಕಿಂತ ದೊಡ್ಡ, ಬೇರೆ ವಿಷವಿಲ್ಲ ಅನ್ನುವ ಸತ್ಯವನ್ನು ಮಕ್ಕಳು ಎಂದಿಗೂ ಮರೆಯದಿರಲಿ.
“ನಾನು” ಎಂದೂ “ನನ್ನದು” ಎಂದೂ ಇರುವ ಇವತ್ತಿನ ನಮ್ಮ ಸಂಕುಚಿತ ದೃಷ್ಟಿಕೋಣವು “ನಾವು” ಎಂದೂ “ನಮ್ಮದು” ಎಂದೂ ಇರುವ ವಿಶಾಲ ಮನೋಭಾವಕ್ಕೆ ಮಾರ್ಗ ಪಲ್ಲಟವಾಗಬೇಕು. – ಅಮ್ಮ
ಇಂದು ತಂತ್ರಜ್ಞಾನವು ಬೆಳೆದು ವಿಕಾಸಗೊಂಡು ಜೀವನದ ಗುಣಮಟ್ಟ ಏರಿದೆಯೆಂದು ಅಂದು ಕೊಳ್ಳುತ್ತೇವೆ. ಆದರೆ ಆ ವಿದ್ಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಬೇಕಾದ ಮನಸ್ಸಿನ ಪಕ್ವತೆ ಕೂಡ ನಾವು ಪಡೆಯಬೇಕು. ಇಲ್ಲಾಂದರೆ ಅವಘಡವಾದೀತು. – ಅಮ್ಮ