ಕಳೆದ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ 40+ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಮಾತಾ ಅಮೃತಾನಂದಮಯಿ ಮಠ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ. ದೇಶ ಹೆಮ್ಮೆಯ ಯೋಧರನ್ನು ಕಳೆದುಕೊಂಡಿದೆ. ಯೋಧರ ಕುಟುಂಬಕ್ಕೆ ಸಹಾಯ ಮಾಡುವುದು ನಮ್ಮ ಧರ್ಮ, ನಮ್ಮನ್ನು ಸುರಕ್ಷಿತವಾಗಿಡಲು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಸ್ಥರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ಶ್ರೀ ಮಾತಾ […]
Author / amrita
ಪ್ರಪಂಚದಲ್ಲಿ ಯಾವುದೂ ನಿಕೃಷ್ಟವಲ್ಲ. ಒಂದು ವಿಮಾನದ ಎಂಜಿನ್ ಕೆಟ್ಟುಹೋದಲ್ಲಿ ಹಾರಲು ಸಾಧ್ಯವಿಲ್ಲ, ಒಂದು ಸ್ಕ್ರೂ ಇಲ್ಲದ್ದಿದ್ದರೂ ಹಾರಲು ಸಾಧ್ಯವಿಲ್ಲ. ಎಲ್ಲಕ್ಕೂ ಅದರದ್ದೇ ಆದ ಸ್ಥಾನವಿದೆ. ಒಂದೊಂದು ವೃಕ್ಷವನ್ನು ಕತ್ತರಿಸುವಾಗಲೂ ಅದು ನಮಗೆ ಶವಪೆಟಿಗೆಯನ್ನು ನಿರ್ಮಾಣ ಮಾಡುವ ಸಲುವಾಗಿ ವೃಕ್ಷಗಳನ್ನು ಕತ್ತರಿಸುತ್ತಿರುವಂತೆ ಆಗಿಹೋಗುತ್ತಿದೆ.
ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ಸಿಗಬೇಕಾದದ್ದು ಅವರ ತಾಯಿಯಂದಿರಿಂದ. ಆದರೆ ಇವತ್ತು ನಮ್ಮ ತಾಯಂದಿರಿಗೆ ಅವರ ಮಕ್ಕಳು ಡಾಕ್ಟರಾಗಬೇಕು, ಅಲ್ಲದಿದ್ದರೆ ಎಂಜಿನೀಯರ್ ಆಗಬೇಕು ಎಂದು ಮಾತ್ರವೆ ಇರುವುದು. ಮಕ್ಕಳು ಒಳ್ಳೆ ಮನುಷ್ಯರಾಗಬೇಕು ಎನ್ನುವುದಕ್ಕೆ, ಅಪ್ಪ ಅಮ್ಮಂದಿರು ಸ್ವಲ್ಪವೂ ಪ್ರಾಮುಖ್ಯತೆ ನೀಡುವುದಿಲ್ಲ. ನಮಗೆ ನಮ್ಮದೆ ಆದ ಯಾವುದೆ ಆದರ್ಶವಿಲ್ಲ. – ಅಮ್ಮ
ಇಂದು ನಾವು ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಲಿಸುತ್ತಿದ್ದೇವೆ. ಆದರೆ ಜೀವನವೆನ್ನುವುದು ಕೇವಲ ಬಿಸಿನೆಸ್ ಮಾತ್ರವಲ್ಲ. ಅದು ಹೇಗೆ ಜೀವನವನ್ನು ಅದರ ಪೂರ್ಣತೆಯಲ್ಲಿ ಅನುಭವಿಸುವುದು ಎನ್ನುವುದನ್ನು ಕಲಿತುಕೊಳ್ಳಬೇಕಾದರೆ, ಆಧ್ಯಾತ್ಮಿಕತೆಯನ್ನು ಅರಿತುಕೊಳ್ಳಬೇಕು. ಆಧ್ಯಾತ್ಮಿಕತೆಯು, ಜೀವನದ ಪೂರ್ಣ ಮ್ಯಾನೇಜ್‌ಮೆಂಟನ್ನು ಕಲಿಸುತ್ತದೆ. – ಅಮ್ಮ
ನಮ್ಮ ಮಕ್ಕಳು ಹಲವು ವಿಧದ ವಿಷಯಗಳ ಬಗ್ಗೆ ಹೆಚ್ಚು ಕಲಿಯುತ್ತಾರೆ. ಆದರೆ ಈ ತಿಳುವಳಿಕೆಯೆಲ್ಲ ಅಡಿಪಾಯವಿಲ್ಲದೆ ಕಟ್ಟಿದ ಮನೆಯ ಹಾಗೆ. ಮೂಲಭೂತವಾಗಿ ಅರಿತು ಕೊಂಡಿರಬೇಕಾದ ಆಧ್ಯಾತ್ಮಿಕತೆಗೆ ನಾವು ನಮ್ಮ ಜೀವನದಲ್ಲಿ ಯಾವ ಸ್ಥಾನವನ್ನೂ ಕೊಡುತ್ತಿಲ್ಲ. – ಅಮ್ಮ

Download Amma App and stay connected to Amma