ಭಾರತದ ಸಂಪತ್ತೆಂದರೆ ಪ್ರೇಮ. ಜೀವನದ ಅಡಿಪಾಯ ಪ್ರೇಮವಾಗಿದೆ.

ಇಂದು ನಾವು ಅನುಭವಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಲ್ಲಿ ಶೇಕಡಾ ತೊಂಬತ್ತು ಭಾಗ ಆಗಿಹೋದ ದುಃಖ ಮತ್ತು ನೋವುಗಳಿಂದ ಉಂಟಾಗಿವೆ. ಇಂತಹ ಗುಣವಾಗದ ಅನೇಕ ಗಾಯಗಳೊಂದಿಗೆ ಪ್ರತಿಯೊಬ್ಬರೂ ಇಂದು ಜೀವಿಸುತ್ತಿದ್ದಾರೆ.
ಇಂತಹ ಗಾಯಗಳನ್ನು ಗುಣಪಡಿಸಲು ವೈದ್ಯಶಾಸ್ತ್ರದಲ್ಲಿ ಯಾವುದೇ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಇದಕ್ಕೊಂದು ಪರಿಹಾರವಿದೆ. ಪರಸ್ಪರ ಹೃದಯವನ್ನು ತೆರೆಯಿರಿ. ಭಾವನೆಗಳನ್ನು ಹಂಚಿಕೊಳ್ಳಿರಿ. ಒಬ್ಬರ ಕೊರತೆಯನ್ನು ತುಂಬಲು ಇನ್ನೊಬ್ಬರು ಪ್ರಯತ್ನಿಸಬೇಕು.
ಮಕ್ಕಳೇ, ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆದಾಗ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ. ಪ್ರೀತಿಯೇ ಜೀವನದ ಅಡಿಪಾಯ. ತಿಳಿದೋ ತಿಳಿಯದೆಯೋ ನಾವು ಇದನ್ನು ಅಲಕ್ಷಿಸಿರುವುದು ಇಂದಿನ ಎಲ್ಲ ಸಮಸ್ಯೆಗಳ ಮೂಲಕಾರಣ.
ದೇಹಕ್ಕೆ ಬೆಳೆಯಲು ಆಹಾರ ಬೇಕಾದರೆ, ಆತ್ಮಕ್ಕೆ ಬೆಳೆಯಲು ಪ್ರೀತಿ ಬೇಕು. ತಾಯಿಯ ಹಾಲು ನೀಡಲಾಗದ ಶಕ್ತಿ ಮತ್ತು ಹುರುಪನ್ನು ಪ್ರೇಮವು ನೀಡಬಲ್ಲದು. ಆದ್ದರಿಂದ ಮಕ್ಕಳೇ, ಪರಸ್ಪರ ಪ್ರೀತಿಸಿ ಒಂದಾಗಿರಿ. ಇದು ಅಮ್ಮನ ಆಶಯ. ಈ ಆದರ್ಶವನ್ನು ಮಕ್ಕಳು ಬೆಳೆಸಿಕೊಳ್ಳಬೇಕು.

Download Amma App and stay connected to Amma